ನರೇಂದ್ರ ಮೋದಿ ಅವರು ಕಾಶ್ಮೀರಕ್ಕೆ ಏನೂ ಕೊಡುಗೆ ಕೊಟ್ಟರು ಎಂಬುದಕ್ಕೆ ಇಲ್ಲಿದೆ ಉತ್ತರ

Spread the love
 • 3K
 •  
 •  
 •  
 •  
 •  
  3K
  Shares

ಜಮ್ಮು ಮತ್ತು ಕಾಶ್ಮೀರ ಕೇವಲ ಕೆಲವೇ ಕೆಲವು ದಿನಗಳ ಹಿಂದೆ ಉಗ್ರರ ಅಟ್ಟಹಾಸಕ್ಕೆ ನಲುಗಿ ಹೋಗುತ್ತಿತ್ತು, ಜಮ್ಮು ಮತ್ತು ಕಾಶ್ಮೀರದ ಜನತೆಯು ಶಾಂತಿ ಎಂಬ ಮಾತನ್ನು ಕೇಳಿ ಅದೆಷ್ಟು ವರ್ಷಗಳು ಕಳೆದಿದ್ದವು ಎಂಬಂತೆ ಭಾಸವಾಗಿತ್ತು. ಆದರೆ ಕೇವಲ ಜನತೆಯ ಹಿತಕ್ಕೋಸ್ಕರ ತಮ್ಮ ಸರ್ಕಾರವನ್ನೇ ಬೀಳಿಸಿಕೊಂಡು ಬಿಜೆಪಿ ಪಕ್ಷವು ಮೈತ್ರಿ ಕಳಚಿ ಇಡೀ ದೇಶದ ಜನತೆಗೆ ಬಿಜೆಪಿ ಪಕ್ಷವು ಕೇವಲ ಜನರ ಹಿತಕ್ಕೋಸ್ಕರ ಮತ್ತು ದೇಶಕ್ಕೋಸ್ಕರ ಏನು ಬೇಕಾದರೂ ಮಾಡಲು ಸಿದ್ಧ ಎಂಬ ಸಂದೇಶವನ್ನು ಸಾರಿತ್ತು.

ಇದನ್ನೇ ಅಸ್ತ್ರವಾಗಿ ಮಾಡಿಕೊಂಡು ಬಿಜೆಪಿ ವಿರೋಧಿ ಪಕ್ಷಗಳು ಇದುವರೆಗೂ ನರೇಂದ್ರ ಮೋದಿ ಅವರು ಕಾಶ್ಮೀರಕ್ಕೆ ಯಾವುದೇ ಕೊಡುಗೆಯನ್ನೂ ನೀಡಿಲ್ಲ ಎಂದು ಟೀಕೆಗಳ ಮೇಲೆ ಟೀಕೆಗಳನ್ನು ಮಾಡಿದರು. ಆದರೆ ನರೇಂದ್ರ ಮೋದಿ ಅವರು ಯಾವುದಕ್ಕೂ ಉತ್ತರ ನೀಡದೆ ಸೈನಿಕರ ಕೈಯಲ್ಲಿ ಆದೇಶವನ್ನು ಇಟ್ಟು ಪ್ರತಿಯೊಬ್ಬ ಉಗ್ರರ ದಮನ ಮಾಡಲು ಅವಕಾಶ ನೀಡಿದ್ದರು ಅದರಂತೆಯೇ ಪ್ರತಿದಿನವೂ ಈಗಲೂ ಸಹ ನಮ್ಮ ಯೋಧರು ಉಗ್ರರನ್ನು ನರಕಕ್ಕೆ ಕಳುಹಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.

ಇಷ್ಟೇ ಅಲ್ಲದೆ ನರೇಂದ್ರ ಮೋದಿ ಅವರು ಕಾಶ್ಮೀರದ ಜನತೆಗೆ ಏನು ಉಡುಗೊರೆ ಕೊಟ್ಟರು ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಸರಿಯಾದ ಉತ್ತರ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ಇದ್ದರೂ ಸಹ ಇಲ್ಲದಂತೆ ಭಾಸವಾಗುತ್ತಿತ್ತು ಯಾವುದಾದರೂ ಒಂದು ಉಗ್ರ ಸಂಘಟನೆ ಬೆದರಿಕೆಯೊಡ್ಡಿದ್ದರೆ ಜನರು ಮನೆಯಿಂದ ಹೊರಬರಲು ಸಹ ನಡುಗುತ್ತಿದ್ದರು, ಆದರೆ ನರೇಂದ್ರ ಮೋದಿ ಅವರು ಸೇನೆಗೆ ಅಧಿಕಾರ ಕೊಟ್ಟ ನಂತರ ಎಲ್ಲವೂ ಬದಲಾಗಿದೆ.

ಉಗ್ರ ಸಂಘಟನೆಗಳು ಮತ್ತು ಪ್ರತ್ಯೇಕವಾದಿಗಳು ಜಮ್ಮು ಮತ್ತು ಕಾಶ್ಮೀರ ಚುನಾವಣೆ ಯನ್ನು ನಿಷೇಧಿಸಿ ಜನರಿಗೆ ಮತ ನೀಡದಂತೆ ಬೆದರಿಕೆಯೊಡ್ಡಿದ್ದರು ಸಹ ಯಾವ ಒಬ್ಬ ಮತದಾರನು ಅಂಜದೆ ಶೇಕಡ 74ರಷ್ಟು ಮತದಾರರು ಮನೆಯಿಂದ ಧೈರ್ಯವಾಗಿ ಹೊರ ಬಂದು ಮತದಾನ ಮಾಡಿ ಮೋದಿ ಅವರು ನಮಗೆ ಧೈರ್ಯ ತುಂಬಿದ್ದಾರೆ ಎಂಬ ಸಂದೇಶವನ್ನು ಇಡೀ ದೇಶಕ್ಕೆ ಮತ್ತು ಮೋದಿ ಅವರನ್ನು ದೂಷಿಸುವುದು ವಿರೋದ ಪಕ್ಷಗಳಿಗೆ ಸ್ಪಷ್ಟವಾಗಿ ಸಾರಿದ್ದಾರೆ.

ನರೇಂದ್ರ ಮೋದಿ ಅವರು ಸೈನಿಕರ ಕೈಯಲ್ಲಿ ಅಧಿಕಾರ ವನ್ನು ಬಿಟ್ಟು ಏನು ಸಾಧಿಸಿದರು ಎಂಬ ಪ್ರಶ್ನೆಗೂ ಸಹ ಇದೇ ಉತ್ತರ  ಅನ್ವಯವಾಗುತ್ತದೆ.


Spread the love
 • 3K
 •  
 •  
 •  
 •  
 •  
  3K
  Shares